Sponsored
Sponsored
Read ವಿಸರ್ಗ | Visarga
Free Edition
Verified Content

ವಿಸರ್ಗ | Visarga

3.43 • 7 ratings • 4 reviews
Overview
ಶ್ರೀಧರ ಬಳಗಾರರ ಈ ಹೊಸ ಕೃತಿಯು ಪರಿಸರದ ನಿಗೂಢತೆ ಮತ್ತು ಸಾಮಾಜಿಕ ಚಲನಶೀಲತೆಗಳಲ್ಲಿ ವ್ಯಕ್ತಿತ್ವ ಮತ್ತು ಜೀವನ ವಿನ್ಯಾಸಗಳು ರೂಪುಗೊಳ್ಳುವ ಬಿಕ್ಕಟ್ಟುಗಳನ್ನು ಕಂಡುಕೊಳ್ಳಲು ಹೊರಟಂತಿದೆ.

ಪರಿಸರವನ್ನು ತನ್ನ ನೇರಕ್ಕೆ ಒಗ್ಗಿಸಿಕೊಳ್ಳುವ ಮಾದರಿಗಿಂತ ಆ ಪರಿಸರವೇ ವ್ಯಕ್ತಿಗಳನ್ನು ತನ್ನ ಹಿಡಿತಕ್ಕೆ ತೆಗೆದು- ಕೊಂಡು ಅವರ ವರ್ತನೆಗಳನ್ನು ನಿರ್ದೇಶಿಸುವ ಬಗ್ಗೆ ಇಲ್ಲಿ ಬಿಂಬಿತವಾಗಿದೆ. ಇದರೊಡನೆ ಸಾಮಾಜಿಕ ನೆಲೆಯಲ್ಲಿ ನಡೆಯುವ ಹತ್ತಾರು ಕ್ರಿಯೆಗಳು ಇಲ್ಲಿನ ಪಾತ್ರಗಳ ನೈಸರ್ಗಿಕ ವ್ಯಕ್ತಿತ್ವಕ್ಕೆ ಸವಾಲಾಗುತ್ತವೆ. ಈ ಕರ್ಷಣೆಯೇ ಕಾದಂಬರಿಯಲ್ಲಿ ಪ್ರಧಾನವಾಗುವ ಹಲವು ವಿಘಟನೆಗಳಿಗೆ, ಒಡಕುಗಳಿಗೆ ಕಾರಣ ಸೂತ್ರವಾಗುತ್ತದೆ. ಪದುಮಳು, ಹೊಲಿಗೆ ಯಂತ್ರದಲ್ಲಿ ಎಲ್ಲವನ್ನು ಕೂಡಿಸಿ ಹೊಲೆಯುತ್ತಾಳೆ. ಆದರೆ ಬದುಕಿನಲ್ಲಿ ಎಲ್ಲವೂ ಹಿಸಿದು ಹೋಗುತ್ತಿರುತ್ತದೆ.
ಆಗ ಮತ್ತೆ ಅವೆಲ್ಲವನ್ನೂ ಒಗ್ಗೂಡಿಸಿಕೊಳ್ಳುವ ದಾರಿಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಇಲ್ಲಿರುವ ಹಲವರು ತಂತಮ್ಮ ಹೊಣೆಗಳನ್ನು ನಿರ್ವಹಿಸಿ ಬದುಕಿನ ರಂಗದಿಂದ ನಿರ್ಗಮಿಸುವುದೇ ತಮ್ಮ ಜೀವನದ ಗುರಿ ಎಂಬಂತೆ ವರ್ತಿಸುತ್ತಾರೆ. ಕೆಲವರು ತಮ್ಮ ಸುತ್ತಣನವರ ಬದುಕನ್ನು ನೇರ್ಪುಗೊಳಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಭಟ್ಟಣ್ಣ, ಗೌರಿ, ನಾಯ್ಡು ಹೀಗೆ ಕೆಲವರ ಇಂತಹ ನಡೆಗಳಲ್ಲಿ ಗೆಲುವು ಸಾಧ್ಯವಾಗದೇ ದೂರವೇ ಉಳಿಯುತ್ತದೆ. ಇದೆಲ್ಲದರ ನಡುವೆ ನಿನ್ನೆಗಳ ಭಾರವನ್ನು ಹೊತ್ತು ನಲುಗಿರುವವರು ಅದರಿಂದ ಬಿಡುಗಡೆ ಪಡೆಯಲು ಇಲ್ಲವೇ ಅದರ ಮೂಲಚೂಲಗಳನ್ನು ಗ್ರಹಿಸಲು ಬಗೆ ಬಗೆಯಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಉಮ್ಮಣ್ಣ ಆ ಯತ್ನದಲ್ಲೇ ವರ್ತಮಾನವನ್ನು ಅರಗಿಸಿಕೊಳ್ಳಲಾಗದೆ ಆಕಳ ಗವಿಯ ನಿಗೂಢತೆಯಲ್ಲಿ ಮರೆಯಾದಂತೆ ತೋರುತ್ತದೆ. ಪದುಮ ಹೇಗೋ ತನ್ನ ಕೈಗೆ ಬಂದ ಹುದುಗಿರಿಸಿದ್ದ ನಿಧಿಯನ್ನು ಸೇತುವೆ ಮೇಲಿಂದ ನದಿಗೆಸೆದು ನಿನ್ನೆಗಳ ಭಾರದಿಂದ ಮುಕ್ತಳಾಗಲು ಮುಂದಾಗುತ್ತಾಳೆ. ಇದೆಲ್ಲದರ ನಡುವೆ ಬದುಕು ಮರಳಿ ನಳನಳಿಸಬಹುದು ಎಂಬ ಆಸೆಯತ್ತ ಕಾದಂಬರಿ ಸಾಗುತ್ತದೆ ಎಂದು ಲೇಖಕ ಕೆ ವಿ ನಾರಾಯಣ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
User Avatar User Avatar User Avatar
36,114 currently reading
User Avatar User Avatar User Avatar
152,889 want to read
Sponsored
Sponsored

Book details & editions

ISBN 9392230567
Publisher Ankita Pustaka
Publication date January 2023
Language KAN
Pages 232 pages
Sponsored
Sponsored
About the Author
Sridhara Balagara

Sridhara Balagara

Follow
Known for writing in a clear, engaging, and easy-to-follow style. The work feels natural and flows smoothly, making it enjoyable from beginning to end.

Ratings & Reviews

5 ★
30%
4 ★
30%
3 ★
25%
2 ★
10%
1 ★
5%
3.43
BlueReads Choice
Sponsored

Write a Review

Community Reviews

Sort by:
Sponsored
Sponsored
Sponsored Content